• Home
  • Uncategorized
  • ಹಳಿಯಾಳದ ಹುಣಸವಾಡ ಬಾಲಕಿಯರ ಖೋ ಖೋ ಗೆಲುವು – ವಿಭಾಗ ಮಟ್ಟಕ್ಕೆ ಅರ್ಹತೆ
Image

ಹಳಿಯಾಳದ ಹುಣಸವಾಡ ಬಾಲಕಿಯರ ಖೋ ಖೋ ಗೆಲುವು – ವಿಭಾಗ ಮಟ್ಟಕ್ಕೆ ಅರ್ಹತೆ

ಹಳಿಯಾಳದ ಹುಣಸವಾಡ ಬಾಲಕಿಯರ ಖೋ ಖೋ ಗೆಲುವು – ವಿಭಾಗ ಮಟ್ಟಕ್ಕೆ ಅರ್ಹತೆ

ಹಳಿಯಾಳ ತಾಲೂಕಿನ ಹುಣಸವಾಡ ಗ್ರಾಮದ ಬಾಲಕಿಯರು ಶಿರಸಿಯಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಖೋ ಖೋ ಪಂದ್ಯವನ್ನು ಗೆದ್ದು ವಿಭಾಗ ಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ.
ತಂಡದಲ್ಲಿ ಸಾವಿತ್ರಿ ಮೋಹನ ಮೋರೆ, ಅನಿತಾ ಪುಂಡಲೀಕ ಭಂಡಾರಿ, ವೈಶಾಲಿ ರಾಮದಾಸ ರೆಡೇಕರ, ಅಭಿಲಾಶಾ ಎಂ., ಧಿಯಾ ರೆಡೇಕರ, ಸಾಕ್ಷಿ ಭುಜಂಗ ಭಂಡಾರಿ, ದಿವ್ಯಾ ಗುಂಡು ಚಿಬ್ಬುಲಕರ, ಪೂರ್ವಾ ಪುಂಡಲೀಕ ರೆಡೇಕರ, ಜ್ಯೋತಿ ಚಂದ್ರಾಮ ಮಡಿವಾಳ, ತೇಜಸ್ವಿನಿ ಉದಯ ಮಿರಾಶಿ, ಪ್ರಣೀತಾ ಗುಂಡು ಚಿಬ್ಬುಲಕರ, ಅಂಕಿತಾ ಚಂದ್ರಾಮ ಮಡಿವಾಳ, ದಿವ್ಯಾ ಮಾರುತಿ ಚಿಬ್ಬುಲಕರ ಸೇರಿದಂತೆ ಹಲವಾರು ಪ್ರತಿಭಾವಂತ ಆಟಗಾರ್ತಿಯರು ಭಾಗವಹಿಸಿದ್ದರು.

ಮೋಹನ ಮುಳ್ಳೂರಿ, ಜ್ಯೋತಿಬಾ ದುಸಗೇಕರ್, ಜ್ಯೋತಿಬಾ ಕಶೀಲಕರ್, ದಿನೇಶ್ ರೆಡೇಕರ ಹಾಗೂ ಶಿಕ್ಷಕರಾದ ಸಂಗಪ್ಪ ದೊಡಮನಿ ಮತ್ತು ಮಾರುತಿ ಸನದಿ ಅವರ ವಿಶೇಷ ತರಬೇತಿಯಲ್ಲಿ ಈ ಸಾಧನೆ ಸಾಧ್ಯವಾಗಿದೆ.

ಸತತ ಮೂರು ವರ್ಷಗಳಿಂದ ಜಿಲ್ಲಾ ಮಟ್ಟದ ಖೋ ಖೋ ಪಂದ್ಯದಲ್ಲಿ ಜಯ ಸಾಧಿಸಿದ ಹುಣಸವಾಡ ಬಾಲಕಿಯರು ಗ್ರಾಮಕ್ಕೆ ಹೆಮ್ಮೆ ತಂದಿದ್ದಾರೆ. ಈ ಸಾಧನೆಗೆ ಗ್ರಾಮಸ್ಥರು ಭಾರಿ ಸಂತೋಷ ವ್ಯಕ್ತಪಡಿಸಿ, ತಂಡದ ಮುಂದಿನ ವಿಭಾಗ ಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

➡️ ಹಳಿಯಾಳ ಸುದ್ದಿ, ಹುಣಸವಾಡ ಗ್ರಾಮ, ಖೋ ಖೋ ಪಂದ್ಯ, ಜಿಲ್ಲಾ ಮಟ್ಟದ ಕ್ರೀಡಾಕೂಟ, ಉತ್ತರ ಕನ್ನಡ, ದಸರಾ ಕ್ರೀಡೆ, ಬಾಲಕಿಯರ ಸಾಧನೆ, ವಿಭಾಗ ಮಟ್ಟದ ಸ್ಪರ್ಧೆ


Releated Posts

ಹವಗಿ ಕಾಲೇಜಿನ ಅಕ್ಷತಾ ಶಂಬಾಜಿ ವಿಶ್ವವಿದ್ಯಾಲಯದಲ್ಲಿ ನಾಲ್ಕನೇ ಸ್ಥಾನ

ಹಳಿಯಾಳ: ಪಟ್ಟಣದ ಹವಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಕು. ಅಕ್ಷತಾ ಶಂಬಾಜಿ ದೊಡ್ಡಗೌಡ ಅವರು ಕರ್ನಾಟಕ ವಿಶ್ವವಿದ್ಯಾಲಯದ ಜುಲೈ–ಆಗಸ್ಟ್ 2024 ಬಿ.ಎಸ್ಸಿ…

ByByShiva Jivoji Sep 24, 2025
1 Comments Text
  • e777game says:
    Your comment is awaiting moderation. This is a preview; your comment will be visible after it has been approved.
    E777game is where it’s at! Good selection of games, and the site is easy to navigate. Been playing here for a while now and haven’t had any issues. Solid choice, fam! e777game
  • Leave a Reply

    Your email address will not be published. Required fields are marked *

    Scroll to Top