ಹಳಿಯಾಳ: ತಾಲೂಕಿನ ಗಡಿಯಲ್ಲಿರುವ ಧಾರವಾಡ ಜಿಲ್ಲೆಯ ಅಳ್ಳಾವರ ರೈಲು ನಿಲ್ದಾಣ ಹಳಿಯಾಳ ಮತ್ತು ದಾಂಡೇಲಿ ತಾಲೂಕುಗಳ ಪ್ರಯಾಣಿಕರ ಜೀವನಾಡಿಯಂತಿದೆ. ಆದರೆ ಕೆಲವು ಪ್ರಮುಖ ರೈಲುಗಳು ಇಲ್ಲಿ ನಿಲ್ಲದೇ ಧಾರವಾಡದಲ್ಲಿ ಮಾತ್ರ ನಿಲುಗಡೆಯಾಗುತ್ತಿರುವುದರಿಂದ ಸ್ಥಳೀಯ ಪ್ರಯಾಣಿಕರು ತೀವ್ರ ಅನಾನುಕೂಲಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಳ್ಳಾವರ ನಿಲ್ದಾಣದಲ್ಲಿ ರೈಲು ನಿಲುಗಡೆ ನೀಡಬೇಕು ಎಂದು ರೈಲು ಬಳಕೆದಾರರ ಬಳಗ ಹಾಗೂ ಹಳಿಯಾಳ ಬಿಜೆಪಿ ಘಟಕ ರೈಲ್ವೆ ಇಲಾಖೆಯ ಸಹಾಯಕ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು. ಪ್ರತಿನಿಧಿಗಳು ವಿಶೇಷವಾಗಿ ಬೆಳಗಾವಿ–ಬೆಂಗಳೂರು ಎಕ್ಸ್‌ಪ್ರೆಸ್ (20654) ಹಾಗೂ ಬೆಳಗಾವಿ–ಬೆಂಗಳೂರು ವಂದೇ ಭಾರತ್ (26751) ರೈಲುಗಳನ್ನು ಅಳ್ಳಾವರದಲ್ಲಿ ನಿಲ್ಲಿಸಲು ಒತ್ತಾಯಿಸಿದರು. ಜೊತೆಗೆ, ಹುಬ್ಬಳ್ಳಿ–ಮುಂಬಯಿ ದಾದರ್ ಎಕ್ಸ್‌ಪ್ರೆಸ್ (17317) ರೈಲಿನಲ್ಲಿ 2ಎ ಮತ್ತು 3ಎ ಬೋಗಿಗಳ ತೀವ್ರ ಕೊರತೆ ಇರುವುದರಿಂದ ಹೆಚ್ಚುವರಿ ಬೋಗಿ ಅಳವಡಿಸಲು ಆಗ್ರಹಿಸಿದರು. ಅಳ್ಳಾವರ ನಿಲ್ದಾಣವು ಹಳಿಯಾಳ ಪಟ್ಟಣಕ್ಕೆ ಅತೀ ಸಮೀಪವಾಗಿದ್ದು, ದಾಂಡೇಲಿ ನಗರದ ನೂರಾರು ಜನರಿಗೆ ಸಹ ಪ್ರಯಾಣಕ್ಕೆ ಅನುಕೂಲಕರವಾಗಿದೆ. ದಿನನಿತ್ಯ ಪ್ರಯಾಣಿಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವುದರಿಂದ, ನಿಲ್ದಾಣದ ಸೌಕರ್ಯ ವಿಸ್ತರಣೆ ಮತ್ತು ಪ್ರಮುಖ ರೈಲುಗಳ ನಿಲುಗಡೆ ಕಾಲದ ಅವಶ್ಯಕತೆ ಎಂದು ಅಭಿಪ್ರಾಯ ವ್ಯಕ್ತವಾಯಿತು. ಮನವಿಯನ್ನು ಸ್ವೀಕರಿಸಿದ ಸಚಿವ ವಿ. ಸೋಮಣ್ಣ, “ರೈಲ್ವೆ ಇಲಾಖೆಯ ಗಮನಕ್ಕೆ ವಿಷಯ ತರಲಾಗುತ್ತದೆ. ಜನರ ಹಿತಾಸಕ್ತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು” ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ರೈಲು ಬಳಕೆದಾರರ ಸಂಘದ ಅಧ್ಯಕ್ಷ ಮಂಗೇಶ್ ದೇಶಪಾಂಡೆ, ಮಾಜಿ ಶಾಸಕ ಸುನೀಲ್ ಹೆಗಡೆ, ಹಳಿಯಾಳ ಬಿಜೆಪಿ ಅಧ್ಯಕ್ಷ ವಿಠಲ ಸಿದ್ದನ್ನವರ, ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬಳೆ ಹಾಗೂ ನೂರಾರು ಪ್ರಯಾಣಿಕರು ಹಾಜರಿದ್ದರು.

ಅಳ್ಳಾವರ ರೈಲು ನಿಲ್ದಾಣದಲ್ಲಿ ಪ್ರಮುಖ ರೈಲುಗಳ ನಿಲುಗಡೆಗೆ ಆಗ್ರಹ

ಹಳಿಯಾಳ: ತಾಲೂಕಿನ ಗಡಿಯಲ್ಲಿರುವ ಧಾರವಾಡ ಜಿಲ್ಲೆಯ ಅಳ್ಳಾವರ ರೈಲು ನಿಲ್ದಾಣ ಹಳಿಯಾಳ ಮತ್ತು ದಾಂಡೇಲಿ ತಾಲೂಕುಗಳ ಪ್ರಯಾಣಿಕರ ಜೀವನಾಡಿಯಂತಿದೆ. ಆದರೆ ಕೆಲವು ಪ್ರಮುಖ ರೈಲುಗಳು ಇಲ್ಲಿ ನಿಲ್ಲದೇ ಧಾರವಾಡದಲ್ಲಿ ಮಾತ್ರ ನಿಲುಗಡೆಯಾಗುತ್ತಿರುವುದರಿಂದ ಸ್ಥಳೀಯ ಪ್ರಯಾಣಿಕರು ತೀವ್ರ ಅನಾನುಕೂಲಕ್ಕೆ ಒಳಗಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಅಳ್ಳಾವರ ನಿಲ್ದಾಣದಲ್ಲಿ ರೈಲು ನಿಲುಗಡೆ ನೀಡಬೇಕು ಎಂದು ರೈಲು ಬಳಕೆದಾರರ ಬಳಗ ಹಾಗೂ ಹಳಿಯಾಳ ಬಿಜೆಪಿ ಘಟಕ ರೈಲ್ವೆ ಇಲಾಖೆಯ ಸಹಾಯಕ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿನಿಧಿಗಳು ವಿಶೇಷವಾಗಿ ಬೆಳಗಾವಿ–ಬೆಂಗಳೂರು ಎಕ್ಸ್‌ಪ್ರೆಸ್ (20654) ಹಾಗೂ ಬೆಳಗಾವಿ–ಬೆಂಗಳೂರು ವಂದೇ ಭಾರತ್ (26751) ರೈಲುಗಳನ್ನು ಅಳ್ಳಾವರದಲ್ಲಿ ನಿಲ್ಲಿಸಲು ಒತ್ತಾಯಿಸಿದರು. ಜೊತೆಗೆ, ಹುಬ್ಬಳ್ಳಿ–ಮುಂಬಯಿ ದಾದರ್ ಎಕ್ಸ್‌ಪ್ರೆಸ್ (17317) ರೈಲಿನಲ್ಲಿ 2ಎ ಮತ್ತು 3ಎ ಬೋಗಿಗಳ ತೀವ್ರ ಕೊರತೆ ಇರುವುದರಿಂದ ಹೆಚ್ಚುವರಿ ಬೋಗಿ ಅಳವಡಿಸಲು ಆಗ್ರಹಿಸಿದರು.

ಅಳ್ಳಾವರ ನಿಲ್ದಾಣವು ಹಳಿಯಾಳ ಪಟ್ಟಣಕ್ಕೆ ಅತೀ ಸಮೀಪವಾಗಿದ್ದು, ದಾಂಡೇಲಿ ನಗರದ ನೂರಾರು ಜನರಿಗೆ ಸಹ ಪ್ರಯಾಣಕ್ಕೆ ಅನುಕೂಲಕರವಾಗಿದೆ. ದಿನನಿತ್ಯ ಪ್ರಯಾಣಿಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವುದರಿಂದ, ನಿಲ್ದಾಣದ ಸೌಕರ್ಯ ವಿಸ್ತರಣೆ ಮತ್ತು ಪ್ರಮುಖ ರೈಲುಗಳ ನಿಲುಗಡೆ ಕಾಲದ ಅವಶ್ಯಕತೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಮನವಿಯನ್ನು ಸ್ವೀಕರಿಸಿದ ಸಚಿವ ವಿ. ಸೋಮಣ್ಣ, “ರೈಲ್ವೆ ಇಲಾಖೆಯ ಗಮನಕ್ಕೆ ವಿಷಯ ತರಲಾಗುತ್ತದೆ. ಜನರ ಹಿತಾಸಕ್ತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು” ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ರೈಲು ಬಳಕೆದಾರರ ಸಂಘದ ಅಧ್ಯಕ್ಷ ಮಂಗೇಶ್ ದೇಶಪಾಂಡೆ, ಮಾಜಿ ಶಾಸಕ ಸುನೀಲ್ ಹೆಗಡೆ, ಹಳಿಯಾಳ ಬಿಜೆಪಿ ಅಧ್ಯಕ್ಷ ವಿಠಲ ಸಿದ್ದನ್ನವರ, ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬಳೆ ಹಾಗೂ ನೂರಾರು ಪ್ರಯಾಣಿಕರು ಹಾಜರಿದ್ದರು.

Releated Posts

ಹಳಿಯಾಳ ಟ್ರ್ಯಾಕ್ಟರ್ ಕಳ್ಳ ಬಂಧನ – 4.80 ಲಕ್ಷ ಮೌಲ್ಯದ ವಾಹನ ವಶ

ಹಳಿಯಾಳ ಸುದ್ದಿ: ಹಳಿಯಾಳ ಮುರ್ಕವಾಡದಲ್ಲಿ ಆಗಸ್ಟ್ 16ರ ರಾತ್ರಿ ₹4.80 ಲಕ್ಷ ಮೌಲ್ಯದ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಕಳವು ಪ್ರಕರಣ ದಾಖಲಾಯಿತು. ಪ್ರಕರಣದ ತನಿಖೆ…

ByByShiva Jivoji Sep 24, 2025

ಹಳಿಯಾಳ: ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ಚುನಾವಣೆಗೆ BJP ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಹಳಿಯಾಳ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (Marketing Society) ಸೆಪ್ಟೆಂಬರ್ 21 ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧಿಸುತ್ತಿರುವ ಭಾರತೀಯ ಜನತಾ ಪಾರ್ಟಿಯ…

ByByShiva Jivoji Sep 24, 2025

ಹಳಿಯಾಳ: ಜಾತಿ ಗಣತಿಗೆ ಚಾಲನೆ – ಎಸ್.ಆರ್.ವಿ. ದೇಶಪಾಂಡೆ

ಹಳಿಯಾಳ: ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಮತ್ತು ಶಾಸಕ ಆರ್.ವಿ. ದೇಶಪಾಂಡೆ ತಮ್ಮ ಸ್ವಗೃಹದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಜಾತಿ ಗಣತಿಗೆ ಅಧಿಕೃತ…

ByByShiva Jivoji Sep 24, 2025

ಈಐಡಿ ಪ್ಯಾರಿ ಕಾರ್ಖಾನೆ ‘ಒಡೆದು ಆಳುವ ನೀತಿ’ – ಮಾಜಿ ಶಾಸಕ ಸುನಿಲ್ ಹೆಗಡೆ ಆರೋಪ

ಹಳಿಯಾಳ: ಪಟ್ಟಣದ ಹುಲ್ಲಟ್ಟಿ ಪ್ರದೇಶದಲ್ಲಿರುವ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ರೈತರ ವಿರುದ್ಧ ‘ಒಡೆದು ಆಳುವ ನೀತಿ’ ಅನುಸರಿಸುತ್ತಿದೆ ಎಂದು ಮಾಜಿ ಶಾಸಕ ಸುನಿಲ್…

ByByShiva Jivoji Sep 24, 2025
1 Comments Text
  • tt88bet says:
    Your comment is awaiting moderation. This is a preview; your comment will be visible after it has been approved.
    Considering using tt88bet. How easy is it to navigate? I don’t want to spend hours trying to find the games I want!
  • Leave a Reply

    Your email address will not be published. Required fields are marked *

    Scroll to Top