• Home
  • ಪ್ರಮುಖ ಸುದ್ದಿ
  • ಈಐಡಿ ಪ್ಯಾರಿ ಕಾರ್ಖಾನೆ ‘ಒಡೆದು ಆಳುವ ನೀತಿ’ – ಮಾಜಿ ಶಾಸಕ ಸುನಿಲ್ ಹೆಗಡೆ ಆರೋಪ
Image

ಈಐಡಿ ಪ್ಯಾರಿ ಕಾರ್ಖಾನೆ ‘ಒಡೆದು ಆಳುವ ನೀತಿ’ – ಮಾಜಿ ಶಾಸಕ ಸುನಿಲ್ ಹೆಗಡೆ ಆರೋಪ

ಹಳಿಯಾಳ: ಪಟ್ಟಣದ ಹುಲ್ಲಟ್ಟಿ ಪ್ರದೇಶದಲ್ಲಿರುವ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ರೈತರ ವಿರುದ್ಧ ‘ಒಡೆದು ಆಳುವ ನೀತಿ’ ಅನುಸರಿಸುತ್ತಿದೆ ಎಂದು ಮಾಜಿ ಶಾಸಕ ಸುನಿಲ್ ಹೆಗಡೆ ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ರೈತ ಮೋರ್ಚಾ ವತಿಯಿಂದ ಹಳಿಯಾಳ ಪಟ್ಟಣದಲ್ಲಿ ನಡೆದ ಮೆರವಣಿಗೆಯ ನಂತರ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹೆಗಡೆ, “ಸ್ಥಳೀಯ ಕಾರ್ಖಾನೆ ಉತ್ತಮ ದರ ನೀಡಿದರೆ ರೈತರು ಬೇರೆಡೆ ಕಬ್ಬು ಕಳುಹಿಸುವ ಪ್ರಶ್ನೆಯೇ ಇಲ್ಲ. ರೈತರ ಹಿತಾಸಕ್ತಿಯನ್ನೇ ಕಾಪಾಡಬೇಕು, ಒತ್ತಾಯ ಹೇರಬಾರದು” ಎಂದು ಎಚ್ಚರಿಸಿದರು.

2016-17 ನೇ ಸಾಲಿನಲ್ಲಿ ಕಾರ್ಖಾನೆ ಪ್ರತಿ ಟನ್‌ಗೆ ₹305 ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರೂ ಅದು ಇಂದಿಗೂ ರೈತರ ಖಾತೆಗೆ ಜಮಾ ಆಗಿಲ್ಲವೆಂದು ಅವರು ಆರೋಪಿಸಿದರು.

ಪ್ರತಿ ವರ್ಷ ಕಬ್ಬು ಸಾಗಿಸುವಾಗ ತೂಕದಲ್ಲಿ ಮೋಸ ನಡೆಯುತ್ತಿದೆ ಎಂಬ ದೂರು ರೈತರಿಂದ ಬರುತ್ತಿದೆ. ಸರ್ಕಾರ ತೂಕದ ಯಂತ್ರ ಅಳವಡಿಸಲು ಆದೇಶಿಸಿದರೂ ಅದು ಇನ್ನೂ ಜಾರಿಗೆ ಬರದೇ ಉಳಿದಿದೆ. “ಇದನ್ನು ತಕ್ಷಣ ಜಾರಿಗೊಳಿಸಬೇಕು, ಇಲ್ಲವಾದರೆ ರೈತರ ಅಸಮಾಧಾನ ಹೆಚ್ಚುತ್ತದೆ” ಎಂದು ಹೆಗಡೆ ಎಚ್ಚರಿಸಿದರು.

ಹಾಗೆಯೇ, ಸ್ಥಳೀಯ ಯುವಕರಿಗೆ ಉದ್ಯೋಗ ನೀಡಬೇಕು ಹಾಗೂ ಪ್ರೋತ್ಸಾಹಧನವಾಗಿ ಜನವರಿ-ಮಾರ್ಚ್ ಅವಧಿಯಲ್ಲಿ ರೈತರಿಗೆ ಪ್ರತಿಟನ್‌ಗೆ ₹100–₹200 ಹೆಚ್ಚುವರಿ ನೀಡಬೇಕೆಂದು ಅವರು ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಬಸಣ್ಣ ಕುರುಬಗಟ್ಟಿ, ರೈತ ಮೋರ್ಚಾ ಅಧ್ಯಕ್ಷ ಸೋನಪ್ಪ ಸುಣಕಾರ, ವಿಠಲ ಸಿದ್ದಣ್ಣವರ, ಸಂತೋಷ್ ಘಟಕಾಂಬಳೆ, ಮಂಗೇಶ್ ದೇಶಪಾಂಡೆ, ಮಾರುತಿ ಭೋಸ್ಲೆ, ಸಹದೇವ್ ಮಿರಾಶಿ, ನಾರಾಯಣ ಕೆಸರೆಕರ, ಹರಿದಾಸ ಬೋಬ್ಲಿ ಸೇರಿದಂತೆ ಅನೇಕ ರೈತ ನಾಯಕರು ಭಾಗವಹಿಸಿದರು.


ಹಳಿಯಾಳ ಸುದ್ದಿ, ಈಐಡಿ ಪ್ಯಾರಿ ಕಾರ್ಖಾನೆ, ರೈತರ ಹೋರಾಟ, ಕಬ್ಬು ದರ 305 ರೂ, ತೂಕದಲ್ಲಿ ಮೋಸ, ಸುನಿಲ್ ಹೆಗಡೆ ಸುದ್ದಿ, ಹುಲ್ಲಟ್ಟಿ ಪ್ರದೇಶ, ಸಕ್ಕರೆ ಕಾರ್ಖಾನೆ ಪ್ರತಿಭಟನೆ, ರೈತ ಮೋರ್ಚಾ ಹಳಿಯಾಳ

Releated Posts

ಹಳಿಯಾಳ ಟ್ರ್ಯಾಕ್ಟರ್ ಕಳ್ಳ ಬಂಧನ – 4.80 ಲಕ್ಷ ಮೌಲ್ಯದ ವಾಹನ ವಶ

ಹಳಿಯಾಳ ಸುದ್ದಿ: ಹಳಿಯಾಳ ಮುರ್ಕವಾಡದಲ್ಲಿ ಆಗಸ್ಟ್ 16ರ ರಾತ್ರಿ ₹4.80 ಲಕ್ಷ ಮೌಲ್ಯದ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಕಳವು ಪ್ರಕರಣ ದಾಖಲಾಯಿತು. ಪ್ರಕರಣದ ತನಿಖೆ…

ByByShiva Jivoji Sep 24, 2025

ಹಳಿಯಾಳ: ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ಚುನಾವಣೆಗೆ BJP ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಹಳಿಯಾಳ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (Marketing Society) ಸೆಪ್ಟೆಂಬರ್ 21 ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧಿಸುತ್ತಿರುವ ಭಾರತೀಯ ಜನತಾ ಪಾರ್ಟಿಯ…

ByByShiva Jivoji Sep 24, 2025

ಹಳಿಯಾಳ: ಜಾತಿ ಗಣತಿಗೆ ಚಾಲನೆ – ಎಸ್.ಆರ್.ವಿ. ದೇಶಪಾಂಡೆ

ಹಳಿಯಾಳ: ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಮತ್ತು ಶಾಸಕ ಆರ್.ವಿ. ದೇಶಪಾಂಡೆ ತಮ್ಮ ಸ್ವಗೃಹದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಜಾತಿ ಗಣತಿಗೆ ಅಧಿಕೃತ…

ByByShiva Jivoji Sep 24, 2025

ಅಳ್ಳಾವರ ರೈಲು ನಿಲ್ದಾಣದಲ್ಲಿ ಪ್ರಮುಖ ರೈಲುಗಳ ನಿಲುಗಡೆಗೆ ಆಗ್ರಹ

ಹಳಿಯಾಳ: ತಾಲೂಕಿನ ಗಡಿಯಲ್ಲಿರುವ ಧಾರವಾಡ ಜಿಲ್ಲೆಯ ಅಳ್ಳಾವರ ರೈಲು ನಿಲ್ದಾಣ ಹಳಿಯಾಳ ಮತ್ತು ದಾಂಡೇಲಿ ತಾಲೂಕುಗಳ ಪ್ರಯಾಣಿಕರ ಜೀವನಾಡಿಯಂತಿದೆ. ಆದರೆ ಕೆಲವು ಪ್ರಮುಖ ರೈಲುಗಳು…

ByByShiva Jivoji Sep 24, 2025

ವಿ.ಡಿ.ಐ.ಟಿ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗೆ ಅರ್ಹತೆ

ಹಳಿಯಾಳದ ಕೆಎಲ್‌ಎಸ್ ವಿ.ಡಿ.ಐ.ಟಿ. (VDIT) ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬೆಳಗಾವಿಯಲ್ಲಿ ನಡೆದ ವಿಭಾಗ ಮಟ್ಟದ ಅಂತರ್ ಕಾಲೇಜು ಪುರುಷರ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ…

ByByShiva Jivoji Sep 24, 2025

ಹಳಿಯಾಳ ಮಹಾಗಣಪತಿ ದೇವಸ್ಥಾನ ಕಳ್ಳತನ: ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಆರ್.ವಿ. ದೇಶಪಾಂಡೆ

📍 ಹಳಿಯಾಳ, ಉತ್ತರ ಕನ್ನಡ:ಪಟ್ಟಣದ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣದ ನಂತರ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ…

ByByShiva Jivoji Sep 15, 2025

ಕಳ್ಳತನ ನಡೆದ ಮಹಾಗಣಪತಿ ದೇವಸ್ಥಾನಕ್ಕೆ ದೇಶಪಾಂಡೆ ಭೇಟಿ

ಕಳ್ಳತನ ನಡೆದ ಮಹಾಗಣಪತಿ ದೇವಸ್ಥಾನಕ್ಕೆ ದೇಶಪಾಂಡೆ ಭೇಟಿ ಪಟ್ಟಣದಲ್ಲಿ ಗಸ್ತು ಹೊಡೆದರೆ ಸಾಲದು; ದೇಶಪಾಂಡೆ ಕರಾವಳಿ ಮುಂಜಾವು ವರದಿ ಹಳಿಯಾಳ: ಪಟ್ಟಣದಲ್ಲಿ ಗಸ್ತು ಹೊಡೆದರೇ…

ByByShiva Jivoji Sep 14, 2025

Leave a Reply

Your email address will not be published. Required fields are marked *

Scroll to Top