• Home
  • Uncategorized
  • ಹವಗಿ ಕಾಲೇಜಿನ ಅಕ್ಷತಾ ಶಂಬಾಜಿ ವಿಶ್ವವಿದ್ಯಾಲಯದಲ್ಲಿ ನಾಲ್ಕನೇ ಸ್ಥಾನ
ಹವಗಿ ಕಾಲೇಜಿನ ಅಕ್ಷತಾ ಶಂಬಾಜಿ ವಿಶ್ವವಿದ್ಯಾಲಯದಲ್ಲಿ ನಾಲ್ಕನೇ ಸ್ಥಾನ

ಹವಗಿ ಕಾಲೇಜಿನ ಅಕ್ಷತಾ ಶಂಬಾಜಿ ವಿಶ್ವವಿದ್ಯಾಲಯದಲ್ಲಿ ನಾಲ್ಕನೇ ಸ್ಥಾನ

ಹಳಿಯಾಳ: ಪಟ್ಟಣದ ಹವಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಕು. ಅಕ್ಷತಾ ಶಂಬಾಜಿ ದೊಡ್ಡಗೌಡ ಅವರು ಕರ್ನಾಟಕ ವಿಶ್ವವಿದ್ಯಾಲಯದ ಜುಲೈ–ಆಗಸ್ಟ್ 2024 ಬಿ.ಎಸ್ಸಿ ಅಂತಿಮ ಪರೀಕ್ಷೆಯಲ್ಲಿ ಶೇ. 93.40 ಅಂಕಗಳನ್ನು ಗಳಿಸಿ, ವಿಶ್ವವಿದ್ಯಾಲಯ ಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಕಾಳಗಿನಕೊಪ್ಪ ಗ್ರಾಮದ ಈ ಪ್ರತಿಭಾವಂತ ವಿದ್ಯಾರ್ಥಿನಿಯ ಶೈಕ್ಷಣಿಕ ಪರಿಶ್ರಮ, ತಾಳ್ಮೆ ಮತ್ತು ಬದ್ಧತೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಇವರ ಸಾಧನೆಗೆ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಮತ್ತು ಹಿರಿಯ ಶಾಸಕರಾದ ಆರ್.ವಿ. ದೇಶಪಾಂಡೆ ಅವರು ಅವರನ್ನು ತಮ್ಮ ಸ್ವಗೃಹದಲ್ಲಿ ಅಭಿನಂದಿಸಿ, ಮುಂದಿನ ಉನ್ನತ ಶಿಕ್ಷಣದಲ್ಲಿ ಯಶಸ್ಸು ಸಾಧಿಸಲು ಹಾರೈಕೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಫಿರೋಜಷಾ ಸೋಮನಕಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ, ಪ್ರಾಚಾರ್ಯ ಸಂಗೀತಾ ಕಟ್ಟಿಮನಿ, ಪ್ರಾಧ್ಯಾಪಕರು ಪರಮಾನಂದ ದಾಸರ, ಲಕ್ಷ್ಮಣ ಕಾಳೆ ಹಾಗೂ ಅನೇಕ ಸಿಬ್ಬಂದಿಗಳು ಹಾಜರಿದ್ದರು.

➡️ : ಹಳಿಯಾಳ ಸುದ್ದಿ, ಹವಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಕ್ಷತಾ ಶಂಬಾಜಿ ಸಾಧನೆ, ಕರ್ನಾಟಕ ವಿಶ್ವವಿದ್ಯಾಲಯ, ಬಿ.ಎಸ್ಸಿ ಅಂತಿಮ ಪರೀಕ್ಷೆ, ವಿದ್ಯಾರ್ಥಿ ಸಾಧನೆ, ಶೈಕ್ಷಣಿಕ ಪ್ರೇರಣೆ, ಹಳಿಯಾಳ ಶಿಕ್ಷಣ ಸುದ್ದಿ

Releated Posts

ಹಳಿಯಾಳದ ಹುಣಸವಾಡ ಬಾಲಕಿಯರ ಖೋ ಖೋ ಗೆಲುವು – ವಿಭಾಗ ಮಟ್ಟಕ್ಕೆ ಅರ್ಹತೆ

ಹಳಿಯಾಳ ತಾಲೂಕಿನ ಹುಣಸವಾಡ ಗ್ರಾಮದ ಬಾಲಕಿಯರು ಶಿರಸಿಯಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಖೋ ಖೋ ಪಂದ್ಯವನ್ನು ಗೆದ್ದು ವಿಭಾಗ…

ByByShiva Jivoji Sep 24, 2025
2 Comments Text
  • xoso66appapk says:
    Your comment is awaiting moderation. This is a preview; your comment will be visible after it has been approved.
    Downloaded the Xoso66appapk! So far so good, seems pretty snappy. Gonna give it a whirl tonight. Def worth a download if you’re into this kinda thing: xoso66appapk
  • bet188login says:
    Your comment is awaiting moderation. This is a preview; your comment will be visible after it has been approved.
    Bet188login process is slick and fast. No more messing around with forgotten passwords. Got me logged in and playing in no time. Super convenient! Login now! bet188login
  • Leave a Reply

    Your email address will not be published. Required fields are marked *

    Scroll to Top