• Home
  • ಪ್ರಮುಖ ಸುದ್ದಿ
  • ಹಳಿಯಾಳ ಮಹಾಗಣಪತಿ ದೇವಸ್ಥಾನ ಕಳ್ಳತನ: ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಆರ್.ವಿ. ದೇಶಪಾಂಡೆ
Image

ಹಳಿಯಾಳ ಮಹಾಗಣಪತಿ ದೇವಸ್ಥಾನ ಕಳ್ಳತನ: ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಆರ್.ವಿ. ದೇಶಪಾಂಡೆ

ಹಳಿಯಾಳ ಮಹಾಗಣಪತಿ ದೇವಸ್ಥಾನ ಕಳ್ಳತನ: ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಆರ್.ವಿ. ದೇಶಪಾಂಡೆ

📍 ಹಳಿಯಾಳ, ಉತ್ತರ ಕನ್ನಡ:
ಪಟ್ಟಣದ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣದ ನಂತರ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಶನಿವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

ದೇಶಪಾಂಡೆ ಅವರು ದೇವಸ್ಥಾನದಲ್ಲಿ ನಡೆದ ಕಳ್ಳತನದಿಂದ ಆದ ಹಾನಿಯನ್ನು ಪರಿಶೀಲಿಸಿ ಮಾತನಾಡಿ –

ಪಟ್ಟಣದಲ್ಲಿ ಕೇವಲ ಗಸ್ತು ಹೊಡೆದರೆ ಸಾಲದು. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಹೆಚ್ಚಿನ ನಿಗಾವಹಿಸಬೇಕು” ಎಂದು ಸೂಚಿಸಿದರು.

ಅವರು ಜನರಿಂದ ತಮ್ಮಿಗೆ ಬಂದ ದೂರವಾಣಿಗಳನ್ನು ಉಲ್ಲೇಖಿಸಿ, ಮನೆಗಳ್ಳತನ, ದೇವಸ್ಥಾನಗಳಲ್ಲಿಯೂ ಕಳ್ಳತನ – ಜನರಲ್ಲಿ ಭಯದ ವಾತಾವರಣ ಉಂಟಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪಿಎಸ್ಐ ಬಸವರಾಜ ಮಬನೂರ ಅವರೊಂದಿಗೆ ಚರ್ಚೆ ನಡೆಸಿದ ದೇಶಪಾಂಡೆ, ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಮುಖ್ಯಚರ್ಯೆ ಗುರುತಿಸುವ ತಂತ್ರಜ್ಞಾನ ಹೊಂದಿರುವ ಆಧುನಿಕ ಸಿಸಿ ಕ್ಯಾಮೆರಾಗಳ ಅಗತ್ಯವಿದೆ ಎಂದು ತಿಳಿಸಿದರು.

ಪೊಲೀಸ್ ಇಲಾಖೆಯವರು ಸಿಸಿ ಕ್ಯಾಮೆರಾಗಳ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ವಹಿಸಬೇಕೆಂದು ಸೂಚಿಸಿದ ಅವರು, ಪಟ್ಟಣಕ್ಕೆ ಉತ್ತಮ ಗುಣಮಟ್ಟದ ಕ್ಯಾಮೆರಾಗಳನ್ನು ಸ್ಥಾಪಿಸಲು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Releated Posts

ಹಳಿಯಾಳ ಟ್ರ್ಯಾಕ್ಟರ್ ಕಳ್ಳ ಬಂಧನ – 4.80 ಲಕ್ಷ ಮೌಲ್ಯದ ವಾಹನ ವಶ

ಹಳಿಯಾಳ ಸುದ್ದಿ: ಹಳಿಯಾಳ ಮುರ್ಕವಾಡದಲ್ಲಿ ಆಗಸ್ಟ್ 16ರ ರಾತ್ರಿ ₹4.80 ಲಕ್ಷ ಮೌಲ್ಯದ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಕಳವು ಪ್ರಕರಣ ದಾಖಲಾಯಿತು. ಪ್ರಕರಣದ ತನಿಖೆ…

ByByShiva Jivoji Sep 24, 2025

ಹಳಿಯಾಳ: ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ಚುನಾವಣೆಗೆ BJP ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಹಳಿಯಾಳ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (Marketing Society) ಸೆಪ್ಟೆಂಬರ್ 21 ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧಿಸುತ್ತಿರುವ ಭಾರತೀಯ ಜನತಾ ಪಾರ್ಟಿಯ…

ByByShiva Jivoji Sep 24, 2025

ಹಳಿಯಾಳ: ಜಾತಿ ಗಣತಿಗೆ ಚಾಲನೆ – ಎಸ್.ಆರ್.ವಿ. ದೇಶಪಾಂಡೆ

ಹಳಿಯಾಳ: ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಮತ್ತು ಶಾಸಕ ಆರ್.ವಿ. ದೇಶಪಾಂಡೆ ತಮ್ಮ ಸ್ವಗೃಹದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಜಾತಿ ಗಣತಿಗೆ ಅಧಿಕೃತ…

ByByShiva Jivoji Sep 24, 2025

ಅಳ್ಳಾವರ ರೈಲು ನಿಲ್ದಾಣದಲ್ಲಿ ಪ್ರಮುಖ ರೈಲುಗಳ ನಿಲುಗಡೆಗೆ ಆಗ್ರಹ

ಹಳಿಯಾಳ: ತಾಲೂಕಿನ ಗಡಿಯಲ್ಲಿರುವ ಧಾರವಾಡ ಜಿಲ್ಲೆಯ ಅಳ್ಳಾವರ ರೈಲು ನಿಲ್ದಾಣ ಹಳಿಯಾಳ ಮತ್ತು ದಾಂಡೇಲಿ ತಾಲೂಕುಗಳ ಪ್ರಯಾಣಿಕರ ಜೀವನಾಡಿಯಂತಿದೆ. ಆದರೆ ಕೆಲವು ಪ್ರಮುಖ ರೈಲುಗಳು…

ByByShiva Jivoji Sep 24, 2025

ಈಐಡಿ ಪ್ಯಾರಿ ಕಾರ್ಖಾನೆ ‘ಒಡೆದು ಆಳುವ ನೀತಿ’ – ಮಾಜಿ ಶಾಸಕ ಸುನಿಲ್ ಹೆಗಡೆ ಆರೋಪ

ಹಳಿಯಾಳ: ಪಟ್ಟಣದ ಹುಲ್ಲಟ್ಟಿ ಪ್ರದೇಶದಲ್ಲಿರುವ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ರೈತರ ವಿರುದ್ಧ ‘ಒಡೆದು ಆಳುವ ನೀತಿ’ ಅನುಸರಿಸುತ್ತಿದೆ ಎಂದು ಮಾಜಿ ಶಾಸಕ ಸುನಿಲ್…

ByByShiva Jivoji Sep 24, 2025

ವಿ.ಡಿ.ಐ.ಟಿ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗೆ ಅರ್ಹತೆ

ಹಳಿಯಾಳದ ಕೆಎಲ್‌ಎಸ್ ವಿ.ಡಿ.ಐ.ಟಿ. (VDIT) ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬೆಳಗಾವಿಯಲ್ಲಿ ನಡೆದ ವಿಭಾಗ ಮಟ್ಟದ ಅಂತರ್ ಕಾಲೇಜು ಪುರುಷರ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ…

ByByShiva Jivoji Sep 24, 2025

ಕಳ್ಳತನ ನಡೆದ ಮಹಾಗಣಪತಿ ದೇವಸ್ಥಾನಕ್ಕೆ ದೇಶಪಾಂಡೆ ಭೇಟಿ

ಕಳ್ಳತನ ನಡೆದ ಮಹಾಗಣಪತಿ ದೇವಸ್ಥಾನಕ್ಕೆ ದೇಶಪಾಂಡೆ ಭೇಟಿ ಪಟ್ಟಣದಲ್ಲಿ ಗಸ್ತು ಹೊಡೆದರೆ ಸಾಲದು; ದೇಶಪಾಂಡೆ ಕರಾವಳಿ ಮುಂಜಾವು ವರದಿ ಹಳಿಯಾಳ: ಪಟ್ಟಣದಲ್ಲಿ ಗಸ್ತು ಹೊಡೆದರೇ…

ByByShiva Jivoji Sep 14, 2025
1 Comments Text
  • qq222login says:
    Your comment is awaiting moderation. This is a preview; your comment will be visible after it has been approved.
    Yo, qq222login is pretty slick. Had a smooth login process and the games load quick. Might just be my new go-to. Give it a whirl qq222login.
  • Leave a Reply

    Your email address will not be published. Required fields are marked *

    Scroll to Top